ಬೆಳಗಾವಿ : ತಾಲೂಕಿನ ಶಿಂದೊಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಯುವ ಮಖಂಡರಾದ ಚೇತನ ಮೋಹನ ಅಂಗಡಿ ಇವರ ಅಧ್ಯಕ್ಷತೆಯ "ಇಶಾನಾ ಪೌಂಡೇಶನ್" ವತಿಯಿಂದ LKG ಹಾಗೂ UKG ವಿದ್ಯಾರ್ಥಿಗಳಿಗೆ "ಸ್ಕೂಲ್ ಬ್ಯಾಗ್" ವಿತರಣೆ ಹಾಗೂ ಸಮಾಜ ಸೇವಕರಾದ ವೀರಭದ್ರಯ್ಯ ಬಾಬು ಪೂಜಾರ ಇವರು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ "ಗಂಗಾ ನದಿ" ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಯುವ ನಾಯಕರಾದ ಚೇತನ ಅಂಗಡಿ ಮಾತನಾಡಿ ಮಕ್ಕಳ ಮುಖದಲ್ಲಿ ಯಾವಾಗಲೂ ನಗು ಇರಬೇಕು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮುಂದಿನ ಭಾರತದ ಭವಿಷ್ಯ ಈ ಮಕ್ಕಳೇ, ಒಂದು ನಿರ್ದಿಷ್ಟ ಗುರಿಯೊಂದಿಗೆ ಸಾಗಿ ಚೆನ್ನಾಗಿ ಅಭ್ಯಾಸ ಮಾಡಿ ತಮ್ಮ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೀರಭದ್ರಯ್ಯ ಪೂಜಾರ ಮಾತನಾಡಿ ಗಂಗಾ ನದಿಯು ಉಗಮದಿಂದ ಹಿಡಿದು ಸಮುದ್ರ ಸೇರುವ ವರೆಗೆ ಭಾರತ ದೇಶದ ಜನರಿಗೆ ಆಗುವ ಉಪಯೋಗಗಳು, ಈ ನದಿಯಲ್ಲಿ ಹಾಗೂ ನದಿ ದಡದಲ್ಲಿ ನಡೆಯುವ ಅನೇಕ ಧಾರ್ಮಿಕ ಆಚರಣೆಗಳು, ನದಿ ಹೊತ್ತು ತರುವ ಫಲವತ್ತಾದ ಮಣ್ಣು, ವಿದ್ಯುತ್ ಉತ್ಪಾದನೆ, ಆಣೆಕಟ್ಟು, ಬೆಳೆ ಬೆಳೆಯಲು ನೀರು ಪೂರೈಕೆ, ಕುಡಿಯುವ ನೀರು ಪೂರೈಕೆ ಮತ್ತು ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನ ವರೆಗೆ ಗಂಗಾ ನದಿಯ ಪ್ರಯೋಜನ ಕುರಿತಾದ ವಿಷಯದ ಪ್ರಬಂಧ ಸ್ಪರ್ಧೆಯು ಆಯೋಜಿಸಿದ್ದು ಈ ಎಲ್ಲ ಅಂಶಗಳು ವಿದ್ಯಾರ್ಥಿಗಳು ತಿಳಿಯಲಿ ಮುಂದೆ ಅವರು ಕೂಡ ಏನಾದರೂ ಹೊಸದೊಂದು ಸಂಶೋಧನೆ ಮಾಡಿ ಊರಿನ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಬೆಲ್ಲದ, ವೃಷಭ ತಿಗಡಿ, ಮಾಳಿಗರಾಯ ಶಾಹಾಪೂರಕರ
ನಿಂಗಣ್ಣ ಮೇಕಲಮರ್ಡಿ, ಗಂಗಾರಾಮ ಕರೆಗಾರ, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

